Crime News

ಸಿಗರೇಟ್ ಕಳ್ಳನ ಬಂಧನ: 37 ಲಕ್ಷ ರೂ. ವಶಕ್ಕೆ,!! ಕಳ್ಳರ ಎಡೆಮುರೆ ಕಟ್ಟಿದ ಸಿಂದಗಿ ಪೊಲೀಸರು

WhatsApp Group Join Now
Telegram Group Join Now

ಸಿಗರೇಟ್ ಕಳ್ಳನ ಬಂಧನ: 37 ಲಕ್ಷ ರೂ. ವಶಕ್ಕೆ,!! ಕಳ್ಳರ ಎಡೆಮುರೆ ಕಟ್ಟಿದ ಸಿಂದಗಿ ಪೊಲೀಸರು

ವರದಿ:ಲಾಲಸಾಬ ಸವಾರಗೋಳ ಸಂಕಲ್ಪ ವಾರ್ತೆ ವಿಜಯಪುರ

ವಿಜಯಪುರ :ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಕಳೆದ ವರ್ಷ ಡಿಸೆಂಬರ್ 24 ರಂದು ನಡೆದ ಸುಮಾರು ರೂ. 42 ಲಕ್ಷ ಮೌಲ್ಯದ ಸಿಗರೇಟ್ ಕಳ್ಳತನ ಪ್ರಕರಣವನ್ನು ಸಿಂದಗಿ ಪೊಲೀಸರು ಬೇಧಿಸಿ, ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.
ರಾಜಸ್ತಾನದ ಜಿತೇಂದ್ರಕುಮಾರ ಮಾಂಗಿಲಾಲ್ ಗೆಹ್ಲೊಟ್(26) ಬಂಧಿತ ಆರೋಪಿ.
ಕಳೆದ ವರ್ಷ ಡಿಸೆಂಬರ್ 24 ರಂದು ನಡೆದ ಈ ಪ್ರಕರಣ ಜಿಲ್ಲೆಯಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಹಾಗಾಗಿ ಈ ಪ್ರಕರಣವನ್ನು ಎಸ್ಪಿ ಋಷಿಕೇಶ ಸೋನಾವಣೆ ಅವರು ಗಂಭೀರವಾಗಿ ಪರಿಗಣಿಸಿದ್ದರು. ಎಸ್ಪಿ ಸೋನಾವಣೆ ಅವರ ಮಾರ್ಗದರ್ಶನದಲ್ಲಿ ಸಿಂದಗಿ ಪೆÇಲೀಸರು ಕಾರ್ಯಾಚರಣೆ ಕೈಗೊಂಡಿದ್ದರು. ಇದೀಗ ಈ ಪ್ರಕರಣವನ್ನು ಬೇಧಿಸುವಲ್ಲಿ ಸಿಂದಗಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ತಾನದ ಜಿತೇಂದ್ರಕುಮಾರ ಮಾಂಗಿಲಾಲ್ ಗೆಹ್ಲೊಟ್(26) ಎಂಬ ಆರೋಪಿಯನ್ನು ಪೋಲೀಸರು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ ಕಾರ ಮತ್ತು ಸಿಗರೇಟ್ ಮಾರಾಟದಿಂದ ಬಂದ ಹಣ ರೂ. 37 ಲಕ್ಷ ರೂಪಾಯಿ ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ರಾಜಸ್ತಾನದ ರಾಜೇಂದ್ರನಗರದ ಆರೋಪಿ ಪ್ರಕಾಶ ದೀಪರಾಮ ಹಾಗೂ ಪಂಜಾಬಿನ ಗುರುಪೀತಸಿಂಗ್ ಪಲ್ವಿಂದರಸಿಂಗ್ ಅವರು ಪರಾರಿಯಾಗಿದ್ದಾರೆ.ಈ ಆರೋಪಿಗಳ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.

ಎಸ್ಪಿ ಋಷಿಕೇಶ ಸೋನಾವಣೆ ಖುದ್ದಾಗಿ ಸಿಂದಗಿಗೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ಭೇದಿಸಿದ ಸಿಂದಗಿ ಪೆÇಲೀಸರಿಗೆ ಪ್ರಶಂಸಾ ಪತ್ರ ನೀಡಿ ಬಹುಮಾನ ವಿತರಿಸಿದರು.
ಈ ಪ್ರಕರಣದಲ್ಲಿ ಗುಜರಾತ, ರಾಜಸ್ತಾನ ಮತ್ತು ದೆಹಲಿ ಮೂಲದ ಕಳ್ಳರ ಕೈವಾಡವಿತ್ತು. ಈ ಹಿನ್ನೆಲೆಯಲ್ಲಿ ತನಿಖೆಗೆ ರಚಿಸಲಾದ ಎರಡು ತಂಡಗಳು ಚುರುಕಿನಿಂದ ಕೆಲಸ ಮಾಡಿದ್ದು, ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಅಲ್ಲದೇ, ಆರೋಪಿ ನೀಡಿದ ಮಾಹಿತಿಯಂತೆ ಬೆಂಗಳೂರಿಗೆ ತೆರಳಿ ಮಾರಾಟ ಮಾಡಲಾಗಿದ್ದ ಸಿಗರೇಟಿನ ಹಣವನ್ನು ವಶಪಡಿಸಿಕೊಂಡಿದ್ದಾರೆ. ಈ ಆರೋಪಿಗಳ ವಿರುದ್ಧ ಬೇರೆ ರಾಜ್ಯಗಳಲ್ಲಿಯೂ ಸಿಗರೇಟ್ ಕಳ್ಳತನ ಮಾಡಿರುವ ಪ್ರಕರಣಗಳು ದಾಖಲಾಗಿವೆ ಎಂದು ಎಸ್ಪಿ ಸೋನಾವಣೆ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

WhatsApp Group Join Now
Telegram Group Join Now
Back to top button
error: Content is protected !!