ಸೈಕ್ಲಿಂಗ್ ಚಾಂಪಿಯನ್ಷಿಪ್: ರಾಜಸ್ಥಾನಕ್ಕೆ ಕರ್ನಾಟಕ ಸೈಕ್ಲಿಸ್ಟ್ಗಳ ಪೈಪೋಟಿ
ಸೈಕ್ಲಿಂಗ್ ಚಾಂಪಿಯನ್ಷಿಪ್: ರಾಜಸ್ಥಾನಕ್ಕೆ ಕರ್ನಾಟಕ ಸೈಕ್ಲಿಸ್ಟ್ಗಳ ಪೈಪೋಟಿ
ವರದಿ:ಲಾಲಸಾಬ ಸವಾರಗೋಳ ಸಂಕಲ್ಪ ವಾರ್ತೆ ವಿಜಯಪುರ
ವಿಜಯಪುರ: ರಾಜಸ್ಥಾನದ ಸೈಕ್ಲಿಸ್ಟ್ಗಳು ಇಲ್ಲಿನ ವಿಜಯಪುರ–ಸೋಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ನಡೆದ 28ನೇ ರಾಷ್ಟ್ರೀಯ ಸೈಕ್ಲಿಂಗ್ ಚಾಂಪಿಯನ್ಷಿಪ್ನ ಎರಡನೇ ದಿನವೂ ಪಾರಮ್ಯ ಮೆರೆದರು. ಆದರೆ ಕೆಲವು ಸ್ಪರ್ಧೆಗಳಲ್ಲಿ ಕರ್ನಾಟಕದ ಸೈಕ್ಲಿಸ್ಟ್ಗಳು ಪೈಪೋಟಿ ನೀಡಿದರು.
14 ವರ್ಷದೊಳಗಿನ ಬಾಲಕರ 20 ಕಿ.ಮೀ. ಟೀಮ್ ಟೈಮ್ ಟ್ರಯಲ್, 16 ವರ್ಷದೊಳಗಿನ ಬಾಲಕರ 30 ಕಿ.ಮೀ ಟೀಮ್ ಟೈಮ್ ಟ್ರಯಲ್, 18 ವರ್ಷದೊಳಗಿನ ಬಾಲಕರ 30 ಕಿ.ಮೀ ವೈಯಕ್ತಿಕ ಟೈಮ್ ಟ್ರಯಲ್ನಲ್ಲಿ ಚಿನ್ನವನ್ನು ಮುಡಿಗೇರಿಸಿಕೊಂಡರು.
16 ವರ್ಷದೊಳಗಿನ ಬಾಲಕಿಯರ 20 ಕಿ.ಮೀ. ಟೀಮ್ ಟೈಮ್ ಟ್ರಯಲ್, 18 ವರ್ಷದೊಳಗಿನ ಬಾಲಕಿಯರ 30 ಕಿ.ಮೀ. ಟೀಮ್ ಟೈಮ್ ಟ್ರಯಲ್, 14 ವರ್ಷದೊಳಗಿನ ಬಾಲಕಿಯರ 15 ಕಿ.ಮೀ. ಟೀಮ್ ಟೈಮ್ ಟ್ರಯಲ್, 23 ವರ್ಷದೊಳಗಿನ ಪುರುಷರ 100 ಕಿ.ಮೀ ಮಾಸ್ಡ್ ಸ್ಟಾರ್ಟ್ನಲ್ಲಿ ಚಿನ್ನವನ್ನು ಬಾಚಿಕೊಂಡಿರುವ ಕರ್ನಾಟಕದ ಸೈಕ್ಲಿಸ್ಟ್ಗಳು ಪದಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ರಾಜಸ್ಥಾನಕ್ಕೆ ತೀವ್ರ ಪೈಪೋಟಿ ಒಡ್ಡಿದ್ದಾರೆ.
ಫಲಿತಾಂಶಗಳು
65 ಕಿ.ಮೀ. ಮಿಕ್ಸೆಡ್ ಟೀಮ್ ರಿಲೆ:
ಭಾರತೀಯ ರೈಲ್ವೇ (ಮಂಜೀತಕುಮಾರ, ವೆಂಕಪ್ಪ ಕೆಂಗಲಗುತ್ತಿ, ಪರಮಾರಾಮ್, ಮೋನಿಕಾ ಜಾಟ್, ಮೇಘಾ ಗೂಗಾಡ, ದಾನಮ್ಮ ಚಿಚಖಂಡಿ, ಕಾಲ: 1ಗಂ.28ನಿ.03.653ಸೆ)-1, ರಾಜಸ್ಥಾನ (ಸುಧೀರಕುಮಾರ, ಮಾನವ ಸರ್ದಾ, ಶರವಣ ಸಾದ, ಕವಿತಾ ಸೀಯಾಗ್, ರಿಂಕು, ಪೂಜಾ ಲೇಗಾ, ಕಾಲ: 1ಗಂ.28ನಿ.59.447 ಸೆ)-2, ಕರ್ನಾಟಕ (ರಾಜು ಭಾಟಿ, ಅನಿಲ ಕಾಳಪ್ಪಗೋಳ, ಪ್ರತಾಪ ಪಡಚಿ, ಚೈತ್ರಾ ಬೋರ್ಜಿ, ಸೌಮ್ಯ ಅಂತಾಪುರ, ಕಾವೇರಿ ಮುರನಾಳ, 1ಗಂ30ನಿ:04:677ಸೆ)-3.
16 ವರ್ಷದೊಳಗಿನ ಬಾಲಕಿಯರ 20 ಕಿ.ಮೀ. ಟೀಮ್ ಟೈಮ್ ಟ್ರಯಲ್:
ಕರ್ನಾಟಕ (ಛಾಯಾ ನಾಗಶೆಟ್ಟಿ, ಜ್ಯೋತಿ ರಾಠೋಡ, ಕೋಕಿಲಾ ಚವ್ಹಾಣ, ಕಾಲ: 30ನಿ23.751ಸೆ)-1, ರಾಜಸ್ಥಾನ (ಅಂಜಲಿ ಜಕಾರ, ಶಿವಾನಿ, ರುಕ್ಮಾಣಿ ಜಾನಿ, ಕಾಲ: 40ನಿ:30.408ಸೆ)-2, ಹರಿಯಾಣ (ಭೂಮಿಕಾ, ವಂಶಿಕಾ, ಅಗ್ರಿಮಾ ಸಂಧು, ಕಾಲ: 40ನಿ:38.293ಸೆ)-3.
14 ವರ್ಷದೊಳಗಿನ ಬಾಲಕರ 20 ಕಿ.ಮೀ. ಟೀಮ್ ಟೈಮ್ ಟ್ರಯಲ್: ರಾಜಸ್ಥಾನ (ಶುಭಂ ಗೌಡರ, ಭಜರಂಗ ಕಾಸವಾನ, ಲೋಕೇಶ ಘಾಟ್, ಕಾಲ: 26ನಿ:53:077 ಸೆ)-1, ಕರ್ನಾಟಕ (ಕರೆಪ್ಪ ಹೆಗಡೆ, ಹೊನ್ನಪ್ಪ ದರಮಟ್ಟಿ, ಸ್ಟ್ಯಾಲಿನ್ ಗೌಡರ, ಕಾಲ: 28ನಿ.10.597ಸೆ)–2, ಹರಿಯಾಣ (ಮೋಕ್ಷ್ ಅನೇಜಾ, ಸನ್ನಿ, ತನೀಶ್, ಕಾಲ: 28ನಿ.34.526 ಸೆ.)–3.
23 ವರ್ಷದೊಳಗಿನ ಪುರುಷರ 100 ಕಿ.ಮೀ ಮಾಸ್ಡ್ ಸ್ಟಾರ್ಟ್: ಉದಯ ಗುಳೇದ (ಕರ್ನಾಟಕ, 2ಗಂ:28ನಿ:56.019ಸೆ)–1, ಪ್ರಣವ ಕಾಂಬಳೆ (ಮಹಾರಾಷ್ಟ್ರ, 2ಗಂ.28ನಿ.57.710 ಸೆ)–2, ರಿತೇಶ್ (ಹರಿಯಾಣ, 2ಗಂ.29ನಿ.54.315 ಸೆ)–3.
16 ವರ್ಷದೊಳಗಿನ ಬಾಲಕರ 30 ಕಿ.ಮೀ ಟೀಮ್ ಟೈಮ್ ಟ್ರಯಲ್: ರಾಜಸ್ಥಾನ (ರಾಧೇಕೃಷ್ಣ ಹೂಡಾ, ಶೌರ್ಯ ಶೇರನ್, ಮಹಾವೀರ ಶರಣ್, ಕಾಲ: 39ನಿ.05.044 ಸೆ)-1, ಹರಿಯಾಣ (ಮನೀಶ್ ನೆಹರಾ, ಅಂಗಾಡ ಸಿಂಗ್, ಮಯಾಂಕ, ಕಾಲ: 40ನಿ:17.537 ಸೆ)-2, ಕರ್ನಾಟಕ (ನಿತೀಶ್ ಪೂಜಾರಿ, ಯಲ್ಲೇಶ ಹುಡೇದ, ಅರವಿಂದ ರಾಠೋಡ್, ಕಾಲ: 40ನಿ:24:383 ಸೆ)-3.
18 ವರ್ಷದೊಳಗಿನ ಬಾಲಕರ 30 ಕಿ.ಮೀ ವೈಯಕ್ತಿಕ ಟೈಮ್ ಟ್ರಯಲ್: ಕೇತಾ ರಾಮ್ (ರಾಜಸ್ಥಾನ, ಕಾಲ: 39ನಿ.53.319 ಸೆ)–1, ಕೈಲಾಶ್ ಜಕಾರ (ರಾಜಸ್ಥಾನ, 40ನಿ.11.997 ಸೆ)–2, ಜೈದೋರ್ಗಾ (ಚಂಡೀಗಢ, ಕಾಲ: 40ನಿ.37.420 ಸೆ)–3
18 ವರ್ಷದೊಳಗಿನ ಬಾಲಕಿಯರ 30 ಕೀ.ಮಿ ಟೀಮ್ ಟೈಮ್ ಟ್ರಯಲ್: ಕರ್ನಾಟಕ (ಅನುಪಮಾ ಗುಳೇದ, ನಂದಾ ಚಿಚಖಂಡಿ, ಕೀರ್ತಿ ನಾಯಕ, ಪಾಯಲ್ ಚವ್ಹಾಣ, 44ನಿ:38:815 ಸೆ)–1, ರಾಜಸ್ಥಾನ (ಹರ್ಷಿತಾ ಜಕಾರ, ಪ್ರಿಯಾಂಕ ಬಿಷ್ಣೋಯಿ, ರಿತಿಕಾ ಬಿಷ್ಣೋಯಿ, ಸೌಮ್ಯಾ, ಕಾಲ: 45ನಿ:24:383 ಸೆ)–2, ಮಹಾರಾಷ್ಟ್ರ(ಅಪೂರ್ವ ಗೋರೆ, ಮನಾಲಿ ರತ್ನೋಜಿ, ಸ್ನೇಹಲ್ ಮಾಳಿ, ಸೃಷ್ಟಿ ಕುಂಬೋಜಿ, ಕಾಲ: 48ನಿ:13:429ಸೆ)–3.
14 ವರ್ಷದೊಳಗಿನ ಬಾಲಕಿಯರ 15 ಕಿ.ಮೀ. ಟೀಮ್ ಟೈಮ್ ಟ್ರಯಲ್: ಕರ್ನಾಟಕ (ಸಂಗವ್ವ ಬನಸೋಡೆ, ಗಾಯತ್ರಿ ಕಿತ್ತೂರ, ದೀಪಿಕಾ ಪಡತಾರೆ, ಕಾಲ: 23ನಿ41:256 ಸೆ)-1, ಮಣಿಪುರ (ತರುಣಕುಮಾರಿ, ಉಷಂ ಸಂಧ್ಯಾ, ಕಾಲ: 24ನಿ42:631 ಸೆ)-2, ಹರಿಯಾಣ (ಏಂಜಲ್ ರಾಣಾ, ಆಶಾ ರಾಣಿ, ಕೋಮಲ್, ಕಾಲ: 24ನಿ57:990ಸೆ)–3.