ಮಂತ್ರಾಕ್ಷತೆ, ರಾಮ ಮಂದಿರ ಭಾವಚಿತ್ರ ವಿತರಣೆಗೆ ಮುಳವಾಡ ಗ್ರಾಮದಲ್ಲಿ ಚಾಲನೆ
ಮಂತ್ರಾಕ್ಷತೆ, ರಾಮ ಮಂದಿರ ಭಾವಚಿತ್ರ ವಿತರಣೆಗೆ ಮುಳವಾಡ ಗ್ರಾಮದಲ್ಲಿ ಚಾಲನೆ
ವರದಿ:ಲಾಲಸಾಬ ಸವಾರಗೋಳ ಸಂಕಲ್ಪ ವಾರ್ತೆ ವಿಜಯಪುರ
ವಿಜಯಪುರ: ಜಿಲ್ಲೆಯ ಕೊಲ್ಹಾರ ತಾಲ್ಲೂಕಿನ ಮುಳವಾಡ ಗ್ರಾಮದಲ್ಲಿ ಅಯ್ಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆ, ರಾಮ ಮಂದಿರದ ಭಾವಚಿತ್ರ ಹಾಗೂ ಆಮಂತ್ರಣ ಪತ್ರಿಕೆ ವಿತರಣಾ ಕಾರ್ಯಕ್ರಮಕ್ಕೆ ಗ್ರಾಮದ ಶ್ರೀ ಪಾಂಡುರಂಗ ವಿಠ್ಠಲ ದೇವಸ್ಥಾನದ ಆವರಣದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರು ಹಣಮಂತ ಕಳಸಗೊಂಡ ಅವರು ಚಾಲನೆ ನೀಡಿದರು.
ಗ್ರಾಮದಲ್ಲಿ ಶುಕ್ರವಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಗ್ರಾಮದ ಹಿಂದು ಕಾರ್ಯಕರ್ತರು ಪ್ರತಿ ಮನೆಗೆ ತೆರಳಿ ರಾಮ ಮಂದಿರ ಭಾವಚಿತ್ರ ಹಾಗೂ ಮಂತ್ರಾಕ್ಷತೆ ವಿತರಣೆ ಮಾಡಲಿದ್ದಾರೆ. ಕಾರ್ಯಕರ್ತರು ಶುಭ್ರ ವಸ್ತ್ರ ಧರಿಸಿರಬೇಕು. ಮಂತ್ರಾಕ್ಷತೆಯ ಮಹತ್ವ ತಿಳಿಸಿಕೊಡಬೇಕು ಎಂದು ಹೇಳಿದರು.ನಂತರ ಗ್ರಾಮದ ವಿವಿಧ ಬಡವಾಣೆಗಳಲ್ಲಿ ಮನೆಗಳಿಗೆ ತೆರಳಿ ಮಂತ್ರಾಕ್ಷತೆ ಹಾಗೂ ರಾಮಮಂದಿರ ಭಾವಚಿತ್ರ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರು ಹಣಮಂತ ಕಳಸಗೊಂಡ ಮತ್ತು ಈರಪ್ಪ ನಾಗನೂರ, ರಮೇಶ್ ಕೊಲೂರ, ಸದಾಶಿವಪ್ಪ ಗಾಯಕವಾಡ, ಪರಸು ಬಡಿಗೇರ, ಅಶೋಕ ಬಡಿಗೇರ, ಸದು ಮೇತ್ರಿ, ವಿನೋದ್ ಮೂಲಿಮನಿ, ಚಂದ್ರಶೇಖರ ಅಗಸರ,ಅಮರ ಚನಾಳ, ಅಂಕುಶ ವಡ್ಡರ. ಮತ್ತಿತರರು ಉಪಸ್ಥಿತರಿದ್ದರು..