Local News

ಲಂಚ ಪಡೆಯಲು ಹೋಗಿ ಲೋಕಾಯುಕ್ತರ ಅಥಿತಿಯಾದ ನಿಡಗುಂದಿ ಪಿಡಿಓ..

ಇ-ಸ್ವತ್ತು ಉತಾರ ಪೂರೈಸಲು ಲಂಚಕ್ಕೆ ಬೇಡಿಕೆ ಇಟ್ಟ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯೊಬ್ಬ ಲೋಕಾಯುಕ್ತ ಪೊಲೀಸರ್ ಅಥಿತಿಯಾಗಿದ್ದಾರೆ.

WhatsApp Group Join Now
Telegram Group Join Now

ಲಂಚಕ್ಕೆ ಬೇಡಿಕೆ ಇಟ್ಟು ಲೋಕಾಯುಕ್ತರ ಅಥಿತಿಯಾದ ನಿಡಗುಂದಿ ಗ್ರಾ ಪಂ ಪಿಡಿಓ.

ಇ-ಸ್ವತ್ತು ಉತಾರ ಪೂರೈಸಲು ಲಂಚಕ್ಕೆ ಬೇಡಿಕೆ ಇಟ್ಟ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯೊಬ್ಬ ಲೋಕಾಯುಕ್ತ ಪೊಲೀಸರ್ ಅಥಿತಿಯಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮ ಪಂಚಾಯತಿ ಪಿಡಿಓ‌‌ ಅಧಿಕಾರಿ‌ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಯಾಗಿದ್ದಾರೆ. ಪಿರ್ಯಾದಿದಾರರಾದ ಶ್ರೀ ಅಪ್ಪಾಸಾಬ ಕೆಂಗನ್ನವರ ಇ- ಸ್ವತ್ತು ಆಸ್ತಿ ನಮೂನೆ-9 & 11 ನ್ನು ನೀಡಲು ಶ್ರೀ ಸದಾಶಿವ ಜಯಪ್ಪ ಕರಗಾರ ಪಂಚಾಯತ ಅಭಿವೃದ್ಧಿ ಅಧಿಕಾರಿ ಮನವಿ‌ ಮಾಡಿದ್ದಾರು‌.

ಸದರಿ ಪಿರ್ಯಾದಿದಾರರ ತಾಯಿಯ ಆಸ್ತಿಗೆ ಸಂಬಂಧಿಸಿದ ಇ-ಸ್ವತ್ತು ಆಸ್ತಿ ನಮೂನೆ-9 & 11 ನ್ನು ನೀಡಲು ಪಿಡಿಓ ಸದಾಶಿವ ಜಯಪ್ಪ ಕರಗಾರ ಅವರು 5000/- ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರಂತೆ. ಹಿನ್ನೆಲೆಯಲ್ಲಿ ಈ ಬಗ್ಗೆ ಲಂಚ ಕೊಡಲು ಮನಸ್ಸಿಲ್ಲದೇ ಪಿರ್ಯಾದಿದಾರರು ಆಪಾದಿತ ಅಧಿಕಾರಿಯ ಲಂಚಬೇಡಿಕೆಯ ಬಗ್ಗೆ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದರು. ‌

ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸ್ ಠಾಣೆ ಬೆಳಗಾವಿಯಲ್ಲಿ ಪ್ರಕರಣ ಸಂಖ್ಯೆ 02/2024 ಕಲಂ 7(ಎ) ಪಿಸಿ ಕಾಯ್ದೆ 1988 (ತಿದ್ದುಪಡಿ- 2018) ರಡಿಯಲ್ಲಿ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಫೆ. 2-2024 ರಂದು ರಾಯಬಾಗ ಪಟ್ಟಣದ ಸತ್ಯಗೌಡ ಭೈರಪ್ಪ ಕಿತ್ತೂರೆ ಸಾ॥ ಬೊಮ್ಮನಾಳ, ಗುತ್ತಿಗೆದಾರರು ಇವರ ಮನೆಯಲ್ಲಿ ಪಿರ್ಯಾದಿಯಿಂದ ಲಂಚದ ಹಣವನ್ನು ಸ್ವೀಕರಿಸುವ ವೇಳೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದಿದ್ದಾರೆ.‌

ಕಾರ್ಯಾಚರಣೆಯನ್ನು ಪಿಎಸ್‌ಐ ಹನುಮಂತರಾಯ, ಪೊಲೀಸ್ ಅಧೀಕ್ಷಕರು ಕರ್ನಾಟಕ ಲೋಕಾಯುಕ್ತ, ಬೆಳಗಾವಿ ರವರ ಮಾರ್ಗದರ್ಶನದಲ್ಲಿ ತನಿಖಾಧಿಕಾರಿಗಳಾದ ಶ್ರೀ ಎ. ಆರ್. ಕಲಾದಗಿ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಶ್ರೀ ಆರ್.ಎಲ್.ಧರ್ಮಟ್ಟಿ, ಶ್ರೀ ನಿರಂಜನ ಪಾಟೀಲ ಮತ್ತು ಸಿಬ್ಬಂದಿಯವರಾದ, ಎಲ್ ಎಸ್ ಹೊಸಮನಿ, ವಿಜಯ ಬಿರಾಜನವರ, ರವಿ ಮಾವರಕರ, ಆರ್.ಬಿ.ಗೋಕಾಕ, ಸಂತೋಷ ಬೆಡಗ, ಗಿರೀಶ ಪಾಟೀಲ ಇವರುಗಳು ಭಾಗವಹಿಸಿ ಟ್ರ್ಯಾಪ್ ಯಶಸ್ವಿಗೊಳಿಸಿರುತ್ತಾರೆ.

ವರದಿ : ಎನ್ ಮಲಿಕಜಾನ್

WhatsApp Group Join Now
Telegram Group Join Now
Back to top button
error: Content is protected !!