Local News

ಜನವರಿ 12 ರಿಂದ ಸಿದ್ದೇಶ್ವರ ಜಾತ್ರಾ‌ ಮಹೋತ್ಸವ ಆರಂಭ,!! ಈ ವರ್ಷ ಹತ್ತಾರು ವಿಶೇಷ ಕಾರ್ಯಕ್ರಮಗಳು

WhatsApp Group Join Now
Telegram Group Join Now

 

ಜನವರಿ 12 ರಿಂದ ಸಿದ್ದೇಶ್ವರ ಜಾತ್ರಾ‌ ಮಹೋತ್ಸವ ಆರಂಭ,!! ಈ ವರ್ಷ ಹತ್ತಾರು ವಿಶೇಷ ಕಾರ್ಯಕ್ರಮಗಳು

ವರದಿ:ಲಾಲಸಾಬ ಸವಾರಗೋಳ ಸಂಕಲ್ಪ ವಾರ್ತೆ ವಿಜಯಪುರ

ವಿಜಯಪುರ: ಇದೇ ಜನವರಿ 12 ರಿಂದ ವಿಜಯಪುರ ನಗರದ ಸಿದ್ದೇಶ್ವರ ಜಾತ್ರಾ‌ ಮಹೋತ್ಸವ ಆರಂಭವಾಗಲಿದೆ. ಕೊರೊನಾ ಕಾರಣದಿಂದ ಹಾಗೂ ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯರಾದ ಕಾರಣ ಕಳೆದ ಮೂರು ವರ್ಷಗಳಿಂದ ಜಾತ್ರೆ ನಡೆದಿರಲಿಲ್ಲ. ಆದರೆ ಈ ವರ್ಷ ಮತ್ತೆ ವಿಜೃಂಭಣೆಯಿಂದ ಸಿದ್ದೇಶ್ವರ ಜಾತ್ರಾ ಮಹೋತ್ಸವ ಜರುಗಲಿದೆ.

ಜನವರಿ 12 ರಂದು ಗೋಮಾತೆ ಪೂಜೆ ಹಾಗೂ ನಂದಿಧ್ವಜಗಳ ಮೆರವಣಿಗೆ ನಡೆಯಲಿದೆ.
ಜನವರಿ 13 ರಂದು ಲಿಂಗದಗುಡಿಯಲ್ಲಿನ 770 ಲಿಂಗಗಳಿಗೆ ಎಣ್ಣೆ ಮಜ್ಜನ ನಡೆಯಲಿದೆ.
ಜನವರಿ 14 ರಂದು ಅಕ್ಷತಾರ್ಪಣೆ ಹಾಗೂ ಭೋಗಿ ಕಾರ್ಯಕ್ರಮ ನಡೆಯಲಿದೆ.

ಜನವರಿ 15 ರಂದು ಹೋಮ ಹವನ, ಪಲ್ಲಕ್ಕಿ ಮೆರವಣಿಗೆ, ಜನವರಿ 16 ರಂದು ಮದ್ದು ಸುಡುವ ಕಾರ್ಯಕ್ರಮ, ಜನವರಿ 17 ರಂದು ಭಾರ ಎತ್ತುವ ಸ್ಪರ್ಧೆ, ಜನವರಿ 18 ರಂದು ಜಂಗೀ ನಿಕಾಲಿ ಕುಸ್ತಿ ಸ್ಪರ್ಧೆಗಳು ಜರುಗಲಿದೆ. ರಾಜ್ಯ-ರಾಷ್ಟ್ರ ಮಟ್ಟದ ಕುಸ್ತಿಪಟುಗಳು ಜಂಗೀ ನಿಕಾಲಿ ಕುಸ್ತಿ ಸ್ಪರ್ಧೆಯಲ್ಲಿ ಭಾಗಿಯಾಗಲಿದ್ದಾರೆ.

ಒಂದು ವಾರಕ್ಕೂ ಹೆಚ್ಚಿನ ಕಾಲ ಜಾತ್ರೆ ನಡೆಯುವುದರಿಂದ ಚಳಿಗಾಲವಿರುವುದರಿಂದ ಜಾನುವಾರುಗಳಿಗೆ ರೋಗ-ರುಜಿನಗಳು ಬರುವ ಸಾಧ್ಯತೆ ಇರುತ್ತದೆ. ಮುಂಜಾಗ್ರತಾ ಕ್ರಮವಾಗಿ ಲಸಿಕೆ, ಔಷದಿಗಳ ವ್ಯವಸ್ಥೆ ಮಾಡಿಟ್ಟುಕೊಳ್ಳಬೇಕು. ಸೂಕ್ತ ವೈದ್ಯೋಪಚಾರಕ್ಕೆ ಪಶು ವೈದ್ಯಾಧಿಕಾರಿಗಳನ್ನು ನೇಮಿಸಿ, 3 ತಂಡಗಳನ್ನು ರಚಿಸಿ ವೈದ್ಯಕೀಯ ಸೇವೆ ಒದಗಿಸಲು ಸೂಚನೆ ನೀಡಲಾಗಿದೆ.

ಜಾತ್ರೆಯಲ್ಲಿ ಅತಿ ಹೆಚ್ಚು ಜನರು ಭಾಗವಹಿಸುವುದರಿಂದ ಸಾರ್ವಜನಿಕರು, ರೈತರ ಅನುಕೂಲಕ್ಕಾಗಿ ಆರೋಗ್ಯ ತಪಾಸಣಾ ಕೇಂದ್ರ, ಜಾನುವಾರು ಜಾತ್ರೆಯಲ್ಲಿ ಜಾನುವಾರುಗಳಿಗೆ ರೋಗಗಳು ಹರಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಔಷಧಿ ಸಿಂಪರಣೆ (ಫಾಗಿಂಗ್) ಹಾಗೂ ಜಾತ್ರೆಯಲ್ಲಿ ದಿನನಿತ್ಯ ಶೇಖರಣೆಯಾಗುವ ಕಸವನ್ನು ತೆರವುಗೊಳಿಸಿ, ಸ್ವಚ್ಛತೆ ಕಾಪಾಡುವುದು ಸೇರಿದಂತೆ ಮಹಾನಗರ ಪಾಲಿಕೆಯಿಂದ ಪಬ್ಲಿಕ್ ಮೊಬೈಲ್ ಶೌಚಾಲಯ ವ್ಯವಸ್ಥೆ, ಹೆಸ್ಕಾಂನಿಂದ ತಾತ್ಕಾಲಿಕವಾಗಿ ವಿದ್ಯುತ್ ವ್ಯವಸ್ಥೆ, ಬೀದಿ ದೀಪಗಳ ಅಳವಡಿಕೆ ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಸೂಚಿಸಲಾಯಿತು.

ಜಾನುವಾರ ಜಾತ್ರೆಗೆ ಹೋಗಿ ಬರಲು ಅನುಕೂಲವಾಗುವಂತೆ ಕೇಂದ್ರ ಬಸ್ ನಿಲ್ದಾಣದಿಂದ ಸೂಕ್ತ ಸಾರಿಗೆ ವ್ಯವಸ್ಥೆ, ಮುಖ್ಯ ರಸ್ತೆಯಿಂದ ಜಾನುವಾರು ಜಾತ್ರೆ ಸ್ಥಳಕ್ಕೆ ಹೋಗುವ ರಸ್ತೆಯನ್ನು ಸುಗಮಗೊಳಿಸಿ, ಜಾತ್ರೆಗೆ ಹೋಗುವ ರೈತರಿಗೆ ಅನುಕೂಲ ಕಲ್ಪಿಸುವುದು, ಮುಂಜಾಗ್ರತಾ ಕ್ರಮವಾಗಿ ಅಗ್ನಿಶಾಮಕ ವಾಹನ ನಿಲುಗಡೆ, ಪೋಲಿಸ್ ಬಂದೋಬಸ್ತ್, ಹಾಗೂ ಪ್ರತಿ ದಿನ ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಹಾಗೂ ಜಾನುವಾರಗಳ ಮಾರಾಟದ ನಂತರ ರಸೀದಿ ನೀಡುವ ಸಂದರ್ಭದಲ್ಲಿ ಜಾನುವಾರುಗಳನ್ನು ಮಾರಾಟ ಮಾಡುವವರು ಹಾಗೂ ಕೊಳ್ಳುವವರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಆಧಾರ ಸಂಖ್ಯೆ ಪಡೆದುಕೊಳ್ಳುವಂತೆ ಮತ್ತು ಮುಂಜಾಗ್ರತಾ ಕ್ರಮವಾಗಿ ಮದ್ಯ ಮಾರಾಟ ನಿಷೇಧಿಸಲು ಸೂಚನೆ ನೀಡಲಾಗಿದೆ.

WhatsApp Group Join Now
Telegram Group Join Now
Back to top button
error: Content is protected !!