ಕೂಡಗಿ ಠಾಣೆಯ ಆದೇಶಕ್ಕೆ ಕ್ಯಾರೇ ಎನ್ನದ ಲಾರಿ ಚಾಲಕರು
ಎನ್ ಟಿ ಪಿ ಸಿ ಅಧಿಕಾರಿಗಳ ಕಣ್ಣಿಗೆ ಕಾಣುತ್ತಿಲ್ಲವೇ.?
ಕೂಡಗಿ ಠಾಣೆಯ ಆದೇಶಕ್ಕೆ ಕ್ಯಾರೇ ಎನ್ನದ ಲಾರಿ ಚಾಲಕರು
ಎನ್ ಟಿ ಪಿ ಅಧಿಕಾರಿಗಳು ಕಣ್ಣಿಗೆ ಕಾಣುತ್ತಿಲ್ಲವೇ.?
ವಿಜಯಪುರ: ಜಿಲ್ಲೆಯ ಕೊಲ್ಹಾರ ತಾಲೂಕಿನ ಕೂಡಗಿ ಉಷ್ಣ ವಿದ್ಯುತ್ ಸ್ಥಾವರದ ಗೇಟ್ ಹತ್ತಿರ ಲಾರಿ ಚಾಲಕರು ರಸ್ತೆಯ ಮೇಲೆ ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುತ್ತಾರೆ
ಕೊಲ್ಹಾರ – ಬಾಗೇವಾಡಿ ಮಾರ್ಗವಾಗಿ ಹೋಗುವ ಸಾರಿಗೆ ಬಸ್ ಸೇರಿದಂತೆ ಇತರ ವಾಹನ ಸವಾರರಿಗೆ ಒಂದಿಲ್ಲೊಂದು ರೀತಿಯಲ್ಲಿ ತೊಂದರೆಯಾಗುತ್ತಿದೆ.
ಈ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಸಂಬಂದಿಸಿದ ಲಾರಿಗಳಿಗೆ ರಸ್ತೆ ಆಜುಬಾಜು ವಾಹನಗಳನ್ನು ಪಾರ್ಕಿಂಗ್ ಮಾಡದಂತೆ ನಾಮಫಲಕ ಹಾಕಿದರು, ಮತ್ತು ಲಾರಿ ಚಾಲಕರಿಗೆ ಕೂಡಗಿ ಪೊಲೀಸ್ ಠಾಣೆಯ ಅಧಿಕಾರಿಗಳು ಸಾಕಷ್ಟು ಜಾಗೃತಿ ಮೂಡಿಸಿದರು ಅದರ ಪ್ರಯೋಜನಕ್ಕೆ ಹೆಸರಿಗೆ ಮಾತ್ರ ಅಲ್ಲದ ಗಾಳಿಗೆ ತೂರಿ ಇಲ್ಲಿ ಎಲ್ಲೆಂದರಲ್ಲಿ ಬುದಿ ತುಂಬಿದ ಲಾರಿಗಳ ದೊಡ್ಡ ಟ್ಯಾಂಕರ್ ನಿಲ್ಲಿಸುತ್ತಿದ್ದಾರೆ.
ಇದರಿಂದ ಈ ಮಾರ್ಗವಾಗಿ ಹಾದು ಹೋಗುವ ಇತರ ಸಾರ್ವಜನಿಕ ವಾಹನ ಸವಾರರಿಗೆ ತೊಂದರೆ ಉಂಟಾಗುವುದಲ್ಲದೆ ಅಪಘಾತಕ್ಕೆ ಎಡೆಮಾಡಿಕೊಡುವ ರೀತಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರದ ವಾಹನಗಳನ್ನು ನಿಲ್ಲಿಸಲಾಗುತ್ತಿದೆ.
ಇದರಿಂದ ಮುಂದೆ ಆಗುವ ಅನಾಹುತಗಳಿಗೆ ಎನ್ ಟಿ ಪಿ ಸಿ ಅಧಿಕಾರಿಗಳು ನೇರ ಹೊಣೆ ಹೊರಬೇಕಾಯಿತು ಕೂಡಲೇ ಎನ್ ಟಿ ಪಿ ಸಿ ಅಧಿಕಾರಿಗಳು ಎಲ್ಲ ಲಾರಿ ಚಾಲಕರಿಗೆ ರಸ್ತೆಯ ಅಕ್ಕಪಕ್ಕದ ಲಾರಿಗಳನ್ನು ನಿಲ್ಲಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.
ವರದಿ:ಲಾಲಸಾಬ ಸವಾರಗೋಳ ಸಂಕಲ್ಪ ವಾರ್ತೆ ವಿಜಯಪುರ