ಕಾಟೇರ 4 ದಿನದ ಕಲೆಕ್ಷನ್ ಕೇಳಿದ್ರೆ ಶಾಕ್ ಆಗ್ತೀರಾ!
ಬಾಕ್ಸಾಫೀಸ್ ಉಡೀಸ್ ಮಾಡಿದ ನಟ ದರ್ಶನ್; ಕಾಟೇರ 4 ದಿನದ ಕಲೆಕ್ಷನ್ ಕೇಳಿದ್ರೆ ಶಾಕ್ ಆಗ್ತೀರಾ!
ದಾಸ ದರ್ಶನ್ ಕ್ಯಾರಿಯರ್ನಲ್ಲೇ ಅತ್ಯುತ್ತಮ ಸಿನಿಮಾ ಎಂದರೆ ಕಾಟೇರ. ಇತ್ತೀಚೆಗೆ ರಿಲೀಸ್ ಆದ ಕಾಟೇರ ಸಿನಿಮಾಗೆ ಅಭಿಮಾನಿಗಳು (ಸೆಲೆಬ್ರಿಟಿಸ್) ಫಿದಾ ಆಗಿದ್ದಾರೆ. ಮೊದಲ ದಿನವೇ ಭರ್ಜರಿ ಓಪನಿಂಗ್ ಪಡೆದ ಕಾಟೇರ ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸಿದೆ. ಸದ್ಯದ ಮಾಹಿತಿ ಪ್ರಕಾರ ಕೇವಲ 4 ದಿನಗಳಲ್ಲಿ ಕಾಟೇರ 75 ಕೋಟಿ ಕ್ಲಬ್ ಸೇರಿದೆ.
ಕನ್ನಡ ಚಿತ್ರರಂಗದಲ್ಲೇ ಮೊಟ್ಟ ಮೊದಲ ಬಾರಿಗೆ ಮೂರು ದಿನಗಳಲ್ಲಿ 75 ಕೋಟಿ ಕ್ಲಬ್ ಸೇರಿದ ಮೊದಲ ನಾನ್ ಪ್ಯಾನ್ ಇಂಡಿಯಾ ಸಿನಿಮಾ ನಮ್ಮ ಕಾಟೇರ. 🥰ನಿಮ್ಮ ಸಹಕಾರ & ಬೆಂಬಲದೊಂದಿಗೆ ಹೊಸ ದಾಖಲೆ ನಿರ್ಮಿಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ🔥
ಜೈ #KaateraBlockBuster #dboss #DBossFans pic.twitter.com/S1LG2utCCe— Jadeshaa k hampi (@jadeshaakhampi) January 2, 2024
ಈ ಸಂಬಂಧ ಟ್ವೀಟ್ ಮಾಡಿರೋ ಸಿನಿಮಾ ತಂಡದ ಭಾಗವಾಗಿದ್ದ ನಿರ್ದೇಶಕ ಜಡೇಶಾ ಕೆ. ಹಂಪಿ ಅವರು, ಕನ್ನಡ ಚಿತ್ರರಂಗದಲ್ಲೇ ಮೊಟ್ಟ ಮೊದಲ ಬಾರಿಗೆ 4 ದಿನಗಳಲ್ಲಿ 75 ಕೋಟಿ ಕ್ಲಬ್ ಸೇರಿದ ಮೊದಲ ನಾನ್ ಪ್ಯಾನ್ ಇಂಡಿಯಾ ಸಿನಿಮಾ ನಮ್ಮ ಕಾಟೇರ. ನಿಮ್ಮ ಸಹಕಾರ & ಬೆಂಬಲದೊಂದಿಗೆ ಹೊಸ ದಾಖಲೆ ನಿರ್ಮಿಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ ಎಂದು ಬರೆದುಕೊಂಡಿದ್ದಾರೆ.
ಬಾಕ್ಸ್ ಆಫೀಸ್ನಲ್ಲಿ ಕಾಟೇರ ಕೋಟಿ ಕೋಟಿ ಕೊಳ್ಳೆ ಹೊಡೆಯುತ್ತಿದ್ದಾನೆ. ಮೊದಲ ದಿನ 20 ಕೋಟಿ ಕಲೆಕ್ಷನ್ ಮಾಡಿದ್ದ ಕಾಟೇರ 2ನೇ ದಿನ 17.35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಮೂರನೇ ದಿನ 20 ಕೋಟಿ ಮತ್ತು 4ನೇ ದಿನ 19 ಕೋಟಿ ಕಲೆಕ್ಷನ್ ಮಾಡಿದೆ. ಎಲ್ಲೆಡೆ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ.