Local News
ಅಥಣಿ: ಸ್ಕೂಟರ್-ಕ್ಯಾಂಟರ್ ನಡುವೆ ಭೀಕರ ಅಪಘಾತ: ಒಬ್ಬ ಶಿಕ್ಷಕ ದುರ್ಮರಣ
)
ಅಥಣಿ: ಗೂಡ್ಸ್ ವಾಹನ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಸ್ಥಳದಲ್ಲಿಯೇ ಶಿಕ್ಷಕ ಸಾವನ್ನಪ್ಪಿದ ಘಟನೆ ಅಥಣಿ ಹೊರವಲಯದ ಗುಂಡದಲಕ್ಷ್ಮಿ ದೇವಸ್ಥಾನದ ಬಳಿ ಜರುಗಿದೆ.
ಬೆಳಗಾವಿ ಜಿಲ್ಲೆಯ ಅಥಣಿ ಗ್ರಾಮೀಣ ಭಾಗದಲ್ಲಿ ಅಪಘಾತ
ಸಂಭವಿಸಿದ್ದು, ಮೃತ ರಾವಸಾಬ್ ಆರ್ ಹಿಪ್ಪರಗಿ (57)
ಮಸರಗುಪ್ಪಿ ಗ್ರಾಮದ ಕಲಕಟ್ಟಿ ಹಳ್ಳದ ತೋಟದ ಸರ್ಕಾರಿ
ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಶನಿವಾರದಂದು ಮುಂಜಾನೆ ಶಾಲೆಗೆ ತೆರಲುತ್ತಿದ್ದ
ಶಿಕ್ಷಕನ ಬೈಕ್ ಹಾಗೂ ಅಥಣಿಯಿಂದ ಮದಭಾವಿ ಕಡೆಗೆ
ಹೋಗುತ್ತಿದ್ದ ಗೂಡ್ಸ್ ವಾಹನ ಮುಖಾಮುಖಿ ಡಿಕ್ಕಿಯಾಗಿದೆ.
ಪರಿಣಾಮ ಸ್ಥಳದಲ್ಲೇ ಶಿಕ್ಷಕ ಸಾವನ್ನಪ್ಪಿದ್ದು ಸ್ಥಳಕ್ಕೆ ಅಥಣಿ
ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವರದಿ: ಪೀರು ನಂದೇಶ್ವರ ಸಂಕಲ್ಪ ವಾರ್ತೆ ಚಿಕ್ಕೋಡಿ
Follow Us