Local News

ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಪ್ರಥಮ ಪುಣ್ಯಸ್ಮರಣೆ ನಿಮಿತ್ಯ ನಡೆದ,!! ಕುಪಕಡ್ಡಿ ಗ್ರಾಮದಲ್ಲಿ ಅಕ್ಷರ ನಮನ ಕಾರ್ಯಕ್ರಮ

WhatsApp Group Join Now
Telegram Group Join Now

ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಪ್ರಥಮ ಪುಣ್ಯಸ್ಮರಣೆ ನಿಮಿತ್ಯ ನಡೆದ,!! ಕುಪಕಡ್ಡಿ ಗ್ರಾಮದಲ್ಲಿ ಅಕ್ಷರ ನಮನ ಕಾರ್ಯಕ್ರಮ

ವರದಿ:ಲಾಲಸಾಬ ಸವಾರಗೋಳ ಸಂಕಲ್ಪ ವಾರ್ತೆ ವಿಜಯಪುರ

ವಿಜಯಪುರ: ಜಿಲ್ಲೆಯ ಕೊಲ್ಹಾರ ತಾಲೂಕಿನ ಕುಪಕಡ್ಡಿ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜ್ಞಾನಯೋಗಿ ಪರಮಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿಯವರ ಪ್ರಥಮ ಪುಣ್ಯಸ್ಮರಣೆ ನಿಮಿತ್ಯ ಅಕ್ಷರ ನಮನ ಎಂಬ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಲಾಯಿತು.

ಶಾಲೆಯ ಸುಮಾರು 200 ಮಕ್ಕಳು ಕಾರ್ಯಕ್ರಮದಲ್ಲಿ ಭಾಗಿಯಾಗಿ ಶ್ರೀಗಳಿಗೆ ಅಕ್ಷರ ನಮನ ಸಲ್ಲಿಸಿದರು. “ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಮಹಾಸ್ವಾಮಿಜೀಗಳು” ಎಂಬ ವಾಕ್ಯವನ್ನು 101 ಬಾರಿ ಬರೆಯುವದರ ಮೂಲಕ ವಿಶಿಷ್ಟವಾಗಿ ನಮನ ಸಲ್ಲಿಸಿದರು. ಶಿಕ್ಷಕಿ ಕವಿತಾ ಹಿರೇಮಠ ರವರು ಮಾತನಾಡಿ ಮಕ್ಕಳು ಶ್ರೀಗಳಿಗೆ ನಮನ ಸಲ್ಲಿಸುವ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಕೂಡ ಆಗುತ್ತಿರುವುದು ತುಂಬಾ ಸಂತಸದ ವಿಷಯ, ಶ್ರೀಗಳ ಆರ್ಶೀವಾದ ನಮ್ಮ ಶಾಲೆಯ ಎಲ್ಲ ಮಕ್ಕಳಿಗೆ ಲಭಿಸಿ ಅವರ ಜ್ಞಾನ ಹೆಚ್ಚುವಂತಾಗಲಿ ಎಂದು ಹರಸಿದರು.

ಮಕ್ಕಳು ತುಂಬಾ ಖುಷಿಯಿಂದ ಶ್ರೀಗಳ ಹೆಸರನ್ನು ಬರೆದು ತಮ್ಮ ಭಕ್ತಿಯನ್ನು ತೋರಿದರು. ಈ ಸಂಧರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ಸಿದ್ದು ಕೋಟ್ಯಾಳ, ಅಧ್ಯಕ್ಷರಾದ ಮುರುಗೇಶ ಹಳ್ಳಿ, ಸಿಬ್ಬಂದಿಗಳಾದ ಹಣಮಂತ ಬಿರಾದಾರ, ಹೇಮಾವತಿ, ಕವಿತಾ ಹಿರೇಮಠ, ಬಾಬು ಪವಾರ, ಶಾಂತಪ್ಪ ನಾಗರಳ್ಳಿ, ಲಕ್ಷ್ಮೀ ವನೇಶಿ, ಆನಂದ ಹೊಲ್ದೂರ ಸೇರಿದಂತೆ ಹಲವರು ಭಾಗಿಯಾಗಿ ಪುಣಿತರಾದರು.

WhatsApp Group Join Now
Telegram Group Join Now
Back to top button
error: Content is protected !!