ರಾಜ್ಯ ಫುಟಬಾಲ್ ತಂಡಕ್ಕೆ ವಿಜಯಪುರದ ರಾಧಿಕಾ ಆಯ್ಕೆ
ರಾಜ್ಯ ಫುಟಬಾಲ್ ತಂಡಕ್ಕೆ ವಿಜಯಪುರದ ರಾಧಿಕಾ ಆಯ್ಕೆ
ವರದಿ:ಲಾಲಸಾಬ ಸವಾರಗೋಳ ಸಂಕಲ್ಪ ವಾರ್ತೆ ವಿಜಯಪುರ
ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್. ಬಿ. ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಪಿಯು ಕಾಲೇಜಿನ ವಿದ್ಯಾರ್ಥಿನಿ ರಾಧಿಕಾ ಕವಟಗಿ ರಾಜ್ಯ 19 ವರ್ಷದೊಳಗಿನ ಬಾಲಕಿಯರ ಫುಟಬಾಲ್ ತಂಡಕ್ಕೆ ಆಯ್ಕೆಯಾಗಿ ಗಮನ ಸೆಳೆದಿದ್ದಾರೆ.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಬಾಲಕಿಯರ 19 ವಯೋಮಿತಿಯ 67ನೆಯ ರಾಷ್ಟ್ರೀಯ ಫುಟ್ಬಾಲ್ ಪಂದ್ಯಾವಳಿ ಜನೇವರಿ 6 ರಿಂದ ಜನೇವರಿ 11ರ ವರೆಗೆ 2024 ರ ವರೆಗೆ ಪಂಜಾಬಿನ ಲುಧಿಯಾನ ಜಿಲ್ಲೆಯಲ್ಲಿ ನಡೆಯಲಿವೆ. ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ಕರ್ನಾಟಕ ಬಾಲಕಿಯರ ತಂಡಕ್ಕೆ ರಾಧಿಕಾ ಕವಟಗಿ ಆಯ್ಕೆಯಾಗಿ ಹೆಮ್ಮೆ ತಂದಿದ್ದಾರೆ.
ವಿದ್ಯಾರ್ಥಿನಿಯ ಸಾಧನೆಗೆ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ, ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ಬಿ. ಕೋಟ್ನಾಳ, ಆಡಳಿತಾಧಿಕಾರಿ ಬಿ. ಆರ್. ಪಾಟೀಲ ಅಭಿನಂದನೆ ಸಲ್ಲಿಸಿದ್ದಾರೆ.
ಈ ಮಧ್ಯೆ ಸೋಮವಾರ ವಿದ್ಯಾರ್ಥಿನಿ ರಾಧಿಕಾ ಕವಟಗಿ ಅವರನ್ನು ಕಾಲೇಜಿನಲ್ಲಿ ದೈಹಿಕ ನಿರ್ದೇಶಕ ಎಸ್. ಎಸ್. ಕೋರಿ, ದೈಹಿಕ ಉಪನಿರ್ದೇಶಕ ಕೈಲಾಸ ಹಿರೇಮಠ, ಪ್ರಾಚಾರ್ಯ ಸಿ. ಬಿ. ಪಾಟೀಲ, ದೈಹಿಕ ಶಿಕ್ಷಕ ವೈ. ಬಿ. ಜಂಪ್ಲೆ ಅಭಿನಂದನೆ ಸಲ್ಲಿಸಿದರು.