ಕೂಡಗಿ (NTPC)ಯ ಬಾಲ ಭಾರತಿ ಪಬ್ಲಿಕ್ ಶಾಲೆ, ವಿದ್ಯಾರ್ಥಿನಿ ಅಮೃತಾ ಮಾಟಿ ರಾಜ್ಯ ಮಟ್ಟಕ್ಕೆ ಆಯ್ಕೆ
ಕೂಡಗಿ (NTPC)ಯ ಬಾಲ ಭಾರತಿ ಪಬ್ಲಿಕ್ ಶಾಲೆ, ವಿದ್ಯಾರ್ಥಿನಿ ಅಮೃತಾ ಮಾಟಿ ರಾಜ್ಯ ಮಟ್ಟಕ್ಕೆ ಆಯ್ಕೆ
ವರದಿ:ಲಾಲಸಾಬ ಸವಾರಗೋಳ ಸಂಕಲ್ಪ ವಾರ್ತೆ ವಿಜಯಪುರ
ವಿಜಯಪುರ: ಜಿಲ್ಲೆಯ ತಿಕೋಟದಲ್ಲಿ ನಡೆದ “ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ” ಯಲ್ಲಿ ಕೂಡಗಿಯ ಬಾಲ ಭಾರತಿ ಪಬ್ಲಿಕ್ ಶಾಲೆಯ ಒಟ್ಟು ನಾಲ್ಕು ವಿದ್ಯಾರ್ಥಿನಿಯರು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಅದರಲ್ಲಿ ಕುಮಾರಿ ಅಮೃತ ಮಾಟಿ ಇವಳು ಸಂಸ್ಕೃತ ಪಾಠ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಕೀರ್ತಿಯನ್ನು ತಂದುಕೊಟ್ಟಿರುತ್ತಾರೆ.
ಅದರಂತೆ ಗೀತಿಕಾ ವೀರಾಂಕಿ ಇವಳು ಸಂಸ್ಕೃತ ಭಾಷೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು, ಪ್ರತ್ಯುಶ್ ತ್ರಿಪಾಟಿ ಇವನು ಹಿಂದಿ ಕಂಠಪಾಠದಲ್ಲಿ ದ್ವಿತೀಯ ಸ್ನಾನ, ಜೋತ್ರನಾ ಹೆಬ್ಬಾಳ ಇವಳು ಕನ್ನಡ ಕವನವಾಚನ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಇವರಿಗೆ ಬಾಲ ಭಾರತಿ ಪಬ್ಲಿಕ್ ಶಾಲೆಯ ಪ್ರಿನ್ಸಿಪಾಲ್ ರಾದ ಶ್ರೀ.ಸಂದೀಪ ಸೋಮಸೋಳೆ, ಹಾಗೂ ಎಲ್ಲಾ ಶಿಕ್ಷಕ ವೃಂದದವರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.