ಆತ್ಮಹತ್ಯೆಗೆ ಯತ್ನಿಸಿದ್ನಾ ಕನ್ನಡದ ಬಿಗ್ ಬಾಸ್ ಸ್ಪರ್ಧಿ..! ತಕ್ಷಣವೇ ಎಚ್ಚೆತ್ತುಕೊಂಡು ತಡರಾತ್ರಿ ಆಸ್ಪತ್ರೆಗೆ ದಾಖಲಿಸಿದ ಸಿಬ್ಬಂದಿ..!
ಡ್ರೋನ್ ಪ್ರತಾಪ್: ಮತ್ತೆ ಆಸ್ಪತ್ರೆ ಪಾಲಾದ ಡ್ರೋನ್ ಪ್ರತಾಪ್: ಹೆಚ್ಚಿದ ಆತಂಕ
ನಿನ್ನೆ ರಾತ್ರಿಯಿಂದಲೇ Bigg boss (ಬಿಗ್ ಬಾಸ್ ಕನ್ನಡ) ಮನೆಯಲ್ಲಿ ಡ್ರೋನ್ ಪ್ರತಾಪ್ (Drone Prathap) ಕಾಣಿಸಿಕೊಂಡಿಲ್ಲ. ಆದ್ದರಿಂದ ಸಹಜವಾಗಿಯೇ ಅವರ ಅಭಿಮಾನಿಗಳಲ್ಲಿ ಆತಂಕ ಉಂಟಾಗುತ್ತದೆ. ಕಳೆದ ಬಾರಿ ಕಣ್ಣಿಗೆ ಸೋಪಿನ ನೀರು ಹಾಕಿಸಿಕೊಂಡು ಆಸ್ಪತ್ರೆ (HOSPITAL) ಸೇರಿದ್ದರು. ಆದರೆ, ಈ ಬಾರಿ ಅವರಿಗೆ ಆಹಾರದಲ್ಲಿ ವ್ಯತ್ಯಾಸವಾಗಿ ಆಸ್ಪತ್ರೆ ಸೇರಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಇನ್ನೂ ಕೆಲವು Bigg Boss ಮನೆಗೆ ವಾಪಸ್ಸು ಆಗದೇ ಇರುವಂತಹ ಘಟನೆ ನಡೆದಿದೆ ಎಂದೂ ಬರೆದುಕೊಂಡಿದ್ದಾರೆ.
Food Poisone ಆಗಿದೆ ಎಂದು ಕೆಲವು ಮೂಲಗಳು ತಿಳಿಸಿವೆ, ಇನ್ನೂ ಕೆಲವರು ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದು ಹೇಳುತ್ತಿದ್ದಾರೆ. Social Media ದಲ್ಲಿ ಕೋವಿಡ್ ಸೋಂಕು ಏನಾದರೂ ತಗಲಿರಬಹುದಾ ಎಂಬ ಪ್ರಶ್ನೆಯನ್ನೂ ಮಾಡಿದ್ದಾರೆ. ಆದ್ದರಿಂದ ಸಹಜವಾಗಿಯೇ ಡ್ರೋನ್ ಪ್ರತಾಪ್ ಅವರ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ. ಪ್ರತಾಪ್ ಅವರಿಗೆ ಏನಾಗಿದೆ ಎಂದು ತಿಳಿಸಿ ಎಂದು ವಾಹಿನಿಗೆ ಸೋಷಿಯಲ್ ಮೀಡಿಯಾ ಮೂಲಕ ಕೇಳುತ್ತಿದ್ದಾರೆ.
ಡ್ರೋನ್ ಪ್ರತಾಪ್ ಅವರ ಟೀಮ್ ಹ್ಯಾಂಡಲ್ ಮಾಡುವಂತಹ ಸೋಷಿಯಲ್ ಮೀಡಿಯಾದಲ್ಲಿ ಊಟದಲ್ಲಿ ಸ್ವಲ್ಪ ವ್ಯತ್ಯಾಸ ಉಂಟಾಗಿ ಹುಷಾರು ತಪ್ಪಿದ್ದಾರೆ. ಇನ್ನ ಸ್ವಲ್ಪ ಸಮಯದ ಒಳಗೆ Bigg Boss ಮನೆಗೆ ನಿಮ್ಮ ಡ್ರೋನ್ ಪ್ರತಾಪ್ ಅವರು ತೆರಳಿದ್ದಾರೆ. ಅವರಿಗೆ ವೋಟ್ ಮಾಡಿ’ ಎಂದು ಪೋಸ್ಟ್ ಮಾಡಲಾಗಿದೆ.
ಬಿಗ್ ಬಾಸ್ ಮನೆಯ ಅಪ್ ಡೇಟ್ ನೀಡುವಂತಹ ಮತ್ತು ಅದರ ಬಗ್ಗೆ ವಿಷಯಗಳು ನಿಜವೂ ಆಗಿರುವಂತಹ BBK ಅಪ್ ಡೇಟ್ ಸೋಷಿಯಲ್ ಮೀಡಿಯಾ ಬರೆದುಕೊಂಡಂತೆ ಮತ್ತೆ ಬಿಗ್ ಬಾಸ್ ಮನೆಗೆ ಬರೋದು ಅನುಮಾನ ಎಂದು ಪೋಸ್ಟ್ ಮಾಡಲಾಗಿದೆ. ಆದ್ದರಿಂದ ಡ್ರೋನ್ ಅವರಿಗೆ ಏನಾಗಿದೆ ಎಂಬ ಆತಂಕ ಎಲ್ಲರದ್ದು.
ಸಂಕಲ್ಪ ವಾರ್ತೆ: ನ್ಯೂಸ್ ಡೆಸ್ಕ್